WORK EXPERIENCE  WORK SHOP

        ನಮ್ಮ ಶಾಲೆಯಲ್ಲಿ    WORK  EXPIRIENCE ಭಾಗವಾಗಿ  ಒಂದು ದಿನದ ಕಾರ್ಯಾಗಾರ ನಡೆಯಿತು.  ಅಳಿಕೆ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ  ಉದ್ಯೋಗಿಯಾಗಿರುವ  ಕೆ.ಎಸ್. ಸುರೇಶ್  ಅವರು ಗೆರೆಗಳಿಂದ ಚಿತ್ರರಚನೆ,ಥರ್ಮೋಕೋಲ್ ನಿಂದ ಬೊಂಬೆಗಳ ತಯಾರಿ ,ಅಕ್ಷರಚಂದವಾಗಿಸುವಿಕೆ  ಇತ್ಯಾದಿ ವಿಚಾರಗಳನ್ನು ಬಹಳ ಚಂದವಾಗಿ ತಿಳಿಸಿಕೊಟ್ಟರು.ಕಾರ್ಯಾಗಾರವನ್ನು  ಪಿ.ಟಿ.ಎ  ಉಪಾಧ್ಯಕ್ಷರಾದ ಸಚ್ಚಿದಾನಂದ.ಎಸ್ ಅವರು  ಉಧ್ಘಾಟಿಸಿದರು. ಕಾರ್ಯಕ್ರಮದ ಕೊನೆಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಕ್ರಷ್ಣ ಭಟ್ ಅವರು ಸುರೇಶ್ ಅವರನ್ನು  ಶಾಲುಹೊದಿಸಿ ಸನ್ಮಾನಿಸಿದರು.     

                 






                                             ಸ್ವಾತಂತ್ರ್ಯ  ದಿನಾಚರಣೆ 

      ನಮ್ಮಶಾಲೆಯಲ್ಲಿ  ಸ್ವಾತಂತ್ಯ್ರ ದಿನಾಚರಣೆ   ಬಹಳ  ವಿಜೃಂಭಣೆಯಿಂದ  ನಡೆಯಿತು  ನಿವೃತ್ತ ಡಿ.ಇ.ಒ   ಶ್ರೀ ಸದಾಶಿವ ನಾಯಕ್. ಯನ್   ಅವರು ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಸಂಚಾಲಕರಾದ  ಶ್ರೀ  ಶಂಕರ್  ಮೋಹನ್ ದಾಸ್ ಆಳ್ವ  ಅವರು  ಅಧ್ಯಕ್ಷತೆ  ವಹಿಸಿದ್ದರು . ವಿವಿಧ ಸ್ಪರ್ಧೆಗಳಲ್ಲಿ  ವಿಜೇತರಾದ  ಮಕ್ಕಳಿಗೆ ಬಹುಮಾನ  ವಿತರಿಸಲಾಯಿತು .ನಂತರ  ಶಾಲಾ ಮಕ್ಕಳಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆದುವು.



                                             






                
                                        ರಕ್ಷಕ -ಶಿಕ್ಷಕ  ಸಂಘದ ಮಹಾಸಭೆ  

            2015 -16 ನೇ ಶಾಲಾ ರಕ್ಷಕ - ಶಿಕ್ಷಕ ಸಂಘದ ವಾರ್ಷಿಕ  ಮಹಾಸಭೆಯು ತಾರೀಕು 10 -8 -2015 ರಂದುಜರಗಿತು.  ಪ್ರಿನ್ಸಿಪಾಲ್  ಶ್ರೀ  ಕೆ . ಜತ್ತಪ್ಪ ರೈ ಅವರು ಹೈಯರ್ ಸೆಕೆಂಡರಿ ವಿಭಾಗದ ಮತ್ತು ಶಿಕ್ಷಕ ಈಶ್ವರ ಭಟ್ ಅವರು ಹೈಸ್ಕೂಲ್  ವಿಭಾಗದ ಲೆಕ್ಕಪತ್ರ ಮಂಡಿಸಿದರು.ಶಾಲಾ ವ್ಯವಸ್ಥಾಪಕರಾದ  ಶ್ರೀ ಶಂಕರ್  ಮೋಹನ್ ದಾಸ್   ಆಳ್ವ  ಅವರು ಉಪಸ್ತಿತರಿದ್ದರು . ಸಭೆಯ ಆರಂಭದಲ್ಲಿ  ಕನ್ನಡದ  ಶ್ರೇಷ್ಟಕವಿ ನಾಡೋಜ ದಿವಂಗತಡಾ . ಕಯ್ಯಾರ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು .

           ನೂತನ ಅಧ್ಯಕ್ಷರಾಗಿ  ಶ್ರೀರಾಮ್ ಭಟ್ ಪೆರ್ಲ ಹಾಗೂ ಉಪಾದ್ಯಕ್ಷರಾಗಿ ಸಚ್ಚಿದಾನಂದ ಯಸ್  ಮುಗೇರು
ಆಯ್ಕೆಗೊಂಡರು .






ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಮ್ಮ ಶಾಲೆಯಲ್ಲಿ  ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು