ಮಕ್ಕಳದಿನಾಚರಣೆ  

ಮಕ್ಕಳದಿನಾಚರಣೆ ಪ್ರಯುಕ್ತ ನಮ್ಮ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಜರಗಿದುವು . ಮಕ್ಕಳೇ ಮಾಡಿದ  ಕೃಷಿಯಲ್ಲಿ ಬೆಳೆದ ಅಲಸಂಡೆಯನ್ನು  ಕೊಯ್ಯಲಾಯಿತು . ಹೊಸರುಚಿ ಅಡುಗೆಸ್ಪರ್ಧೆ,ಬಾಟಲಿಗೆ ನೀರು ತುಂಬಿಸುವುದು , ಮೆಹಂದಿ ಇಡುವುದು ,ಗೂಡುದೀಪ ರಚನೆ ಇತ್ಯಾದಿ ಸ್ಪರ್ಧೆಗಳು  ಜರಗಿದುವು . ಮಧ್ಯಾಹ್ನ ಪಾಯಸದೂಟ ಏರ್ಪಡಿಸಲಾಗಿತ್ತು . ನಂತರ ಮಕ್ಕಳು ಸಭಾಕಾರ್ಯಕ್ರಮ ನಡೆಸಿಕೊಟ್ಟರು . ಶಾಲಾ ಹಳೆವಿದ್ಯಾರ್ಥಿಗಳಾದ ನಿಕೇತ್ ಪಿ.ಎಸ್  ಮತ್ತು ಆಶಿಕಾ.ಎಲ್.ಶೆಟ್ಟಿ  ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಶಾಲಾ ನಾಯಕನಾದ ನಾರಾಯಣ ಶರ್ಮ ಅಧ್ಯಕ್ಷತೆವಹಿಸಿದ್ದನು.     


 



 

 











ಸೈಬರ್ ಅಪರಾಧದ  ವಿರುದ್ದ ಮಕ್ಕಳಲ್ಲಿ ಜಾಗ್ರತಿ ಮೂಡಿಸಲು ಶಾಲೆಯಲ್ಲಿ  ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು . 





                ಕಾಟುಕುಕ್ಕೆ ರಕ್ತಗುಂಪು ನಿರ್ಣಯ ಶಿಬಿರ 

                        
               ಕಾಟುಕುಕ್ಕೆ ಶಾಲೆಯಲ್ಲಿ ವಿದ್ಯಾರ್ಥಿ ರಕ್ತ ಗುಂಪು  ನಿರ್ಣಯ ಶಿಬಿರ ನಡೆಯಿತು . ಶಾಲಾ  ಸಂಚಾಲಕರಾದ ಶ್ರೀ ಶಂಕರ ಮೋಹನದಾಸ್ ಆಳ್ವ  ಅವರು ಶಿಬಿರವನ್ನು ಉಧ್ಘಾಟಿಸಿ ಮಾತನಾಡಿದರು ಪ್ರಾಥಮಿಕ ಆರೋಗ್ಯ ಕೇಂದ್ರ  ಪೆರ್ಲದ ನಯನ ,ಶ್ರೀಜ , ಸ್ವಾತಿ , ಅಶ್ವನಿ, ಅನೀಶ್ , ಬಿಜಿತ್  ಮೊದಲಾದವರು ಉಪಸ್ಥಿತರಿದ್ದರು . ಪೆರ್ಲ ಆರೋಗ್ಯ ಕೇಂದ್ರದ ಅಧಿಕಾರಿ ತಿರುಮಲೇಶ್ ಭಟ್ ತರಬೇತಿ ನಡೆಸಿದರು .  ಪಿ.ಟಿ.ಎ ಅಧ್ಯಕ್ಷರಾದ ಶ್ರೀರಾಮ್  ಭಟ್ ಅಧ್ಯಕ್ಷತೆ ವಹಿಸಿದ್ದರು . ಅಧ್ಯಾಪಕ ಲೋಕನಾಥ ಶೆಟ್ಟಿ ಮಾಯಿಲೆಂಗಿ  ಸ್ವಾಗತಿಸಿದರು .ಮನೋಹರ ಭಟ್ ವಂದಿಸಿದರು . ಕಾನ ಈಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು . 






ಗಾಂಧಿಜಯಂತಿ ಆಚರಣೆ 

ಅಕ್ಟೋಬರ್ 2 ರಂದು ಗಾಂಧಿಜಯಂತಿಯನ್ನು  ಆಚರಿಸಲಾಯಿತು ಶಾಲಾ ಆಡಳಿತಮಂಡಳಿಯ  ಅಧ್ಯಕ್ಷರಾದ  ಸಂಜೀವ ರೈ ಅವರು ದ್ವಜರೋಹಣವನ್ನು  ನೆರವೇರಿಸಿದರು . ಶಾಲಾ ವಿದ್ಯಾರ್ಥಿ ಗಳು  ಶಾಲಾಪರಿಸರ  ಸ್ವಚ್ಛಗೊಳಿಸುವ ಮೂಲಕ ಸ್ವಚ್ಛ ಭಾರತ ಆಂದೋಲನ ದಲ್ಲಿ ಪಾಲ್ಗೊಂಡರು . ನಂತರ ಸಿಹಿತಿಂಡಿ ವಿತರಿಸಲಾಯಿತು . ಮಕ್ಕಳಿಗೆ ಕನಸಿನ ಮಹತ್ವವನ್ನು ತಿಳಿಸುವ ಕನಸು -ಕಣ್ಣು ತೆರೆದಾಗ ಎಂಬ ಸಿನಿಮಾವನ್ನು  ಪ್ರದರ್ಶಿಸಲಾಯಿತು . 





























8ನೇ ತರಗತಿ  ಪಿ.ಟಿ.ಎ    


8ನೇ ತರಗತಿ  ಪಿ.ಟಿ.ಎ  ಸಭೆಯನ್ನು ದಿನಾಂಕ 4/9/2015  ಶುಕ್ರವಾರ ಕರೆಯಲಾಯಿತು . ಸಭೆಯಲ್ಲಿ ಮಕ್ಕಳ ಕಲಿಕಾಮಟ್ಟ ಸುಧಾರಿಸುವ ಕುರಿತು ಚರ್ಚಿಸಲಾಯಿತು . ನಂತರ ಸರಕಾರದಿಂದ ದೊರೆತ ಉಚಿತ ಸಮವಸ್ತ್ರ ವಿತರಣೆ ಜರಗಿತು.  






ಪ್ರಧಾನಮಂತ್ರಿಯವರ ಮಕ್ಕಳ ಜೊತೆ ಸಂವಾದ 

         ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೈಗೊಳ್ಳಲಾದ ಪ್ರಧಾನಮಂತ್ರಿಯವರ ಮಕ್ಕಳ ಜೊತೆ ಸಂವಾದ ಕಾರ್ಯಕ್ರಮವನ್ನು ನಮ್ಮ ಶಾಲಾ ಮಕ್ಕಳು ವೀಕ್ಷಿಸಿದರು 




ಓಣಂ ಆಚರಣೆ  

             ಓಣಂ ಆಚರಣೆ  ಬಹಳ ವಿಜೃಂಭಣೆಯಿಂದ ಜರಗಿತು .ಮಕ್ಕಳು ಬಹಳ ಉಲ್ಲಾಸದಿಂದ ಊರ ಹೂಸಂಗ್ರಹಿಸಿ  ಪೂಕಳಂ ಸ್ಪರ್ಧೆಯಲ್ಲಿ ಭಾಗವಹಿಸಿದರು .  ಮಧ್ಯಾಹ್ನ ಭೂರಿಭೋಜನಸವಿದರು.ಸ್ಪರ್ಧೆಯಲ್ಲಿವಿಜೇತರಾದಮಕ್ಕಳಿಗೆ 
ಬಹುಮಾನ ವಿತರಣೆ ನಡೆಯಿತು  













No comments:

Post a Comment

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಮ್ಮ ಶಾಲೆಯಲ್ಲಿ  ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು